Google Sheets ನಲ್ಲಿ ಡೇಟಾ-ಪ್ರೇರಿತ ನಿರ್ಧಾರಗಳನ್ನು ತೆಗೆದುಕೊಳ್ಳಿ
ಆನ್‌ಲೈನ್ ಸ್ಪ್ರೆಡ್‌ಶೀಟ್‌ಗಳನ್ನು ನೈಜ-ಸಮಯದಲ್ಲಿ ಮತ್ತು ಯಾವುದೇ ಸಾಧನದಿಂದ ರಚಿಸಿ ಮತ್ತು ಅವುಗಳ ಜೊತೆಗೆ ಸಹಯೋಗ ನಡೆಸಿ.
ಯಾವುದೇ ಸ್ಥಳದಿಂದ ಡೇಟಾದೊಂದಿಗೆ ಸಹಯೋಗ ನಡೆಸಿ
ಸುಲಭ ಹಂಚಿಕೊಳ್ಳುವಿಕೆ ಮತ್ತು ನೈಜ-ಸಮಯದ ಎಡಿಟಿಂಗ್ ಮೂಲಕ, ನಿಮ್ಮ ಆನ್‌ಲೈನ್ ಸ್ಪ್ರೆಡ್‌ಶೀಟ್‌ಗಳಲ್ಲಿನ ಡೇಟಾಗಾಗಿ ಮೂಲ ಸತ್ಯವೊಂದನ್ನು ಸ್ಥಾಪಿಸಿ. ವಿಶ್ಲೇಷಣೆಯನ್ನು ಚಾಲ್ತಿಯಲ್ಲಿಡಲು ಕಾಮೆಂಟ್‌ಗಳನ್ನು ಬಳಸಿ ಮತ್ತು ಕ್ರಿಯೆ ಐಟಂಗಳನ್ನು ನಿಯೋಜಿಸಿ.
ಬಿಲ್ಟ್-ಇನ್ ಬುದ್ಧಿಮತ್ತೆಯ ಮೂಲಕ ಒಳನೋಟಗಳನ್ನು ತ್ವರಿತವಾಗಿ ಪಡೆಯಿರಿ
Smart Fill ಮತ್ತು ಫಾರ್ಮುಲಾ ಸಲಹೆಗಳಂತಹ ಸಹಾಯಕ ವೈಶಿಷ್ಟ್ಯಗಳು ತ್ವರಿತವಾಗಿ ಮತ್ತು ಕಡಿಮೆ ತಪ್ಪುಗಳೊಂದಿಗೆ ವಿಶ್ಲೇಷಿಸಲು ನಿಮಗೆ ಸಹಾಯ ಮಾಡುತ್ತವೆ. ಮತ್ತು ನಿಮ್ಮ ಡೇಟಾದ ಕುರಿತು ಸರಳ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳುವ ಮೂಲಕ ತ್ವರಿತವಾಗಿ ಒಳನೋಟಗಳನ್ನು ಪಡೆಯಿರಿ.
ಇತರ Google ಆ್ಯಪ್‌ಗಳಿಗೆ ಯಾವುದೇ ಅಡೆತಡೆಗಳಿಲ್ಲದೇ ಕನೆಕ್ಟ್ ಮಾಡಿ
Sheets ಅನ್ನು ಬುದ್ಧಿವಂತಿಕೆಯಿಂದ ನಿಮ್ಮಿಷ್ಟದ ಇತರ Google ಆ್ಯಪ್‌ಗಳ ಜೊತೆ ಕನೆಕ್ಟ್ ಮಾಡಲಾಗಿದ್ದು, ನಿಮ್ಮ ಸಮಯವನ್ನು ಉಳಿತಾಯ ಮಾಡುತ್ತದೆ. Sheets ನಲ್ಲಿ Google Forms ಡೇಟಾವನ್ನು ಸುಲಭವಾಗಿ ವಿಶ್ಲೇಷಿಸಿ ಅಥವಾ Google Slides ಮತ್ತು Docs ನಲ್ಲಿ Sheets ಚಾರ್ಟ್‌ಗಳನ್ನು ಎಂಬೆಡ್ ಮಾಡಿ. ಅಲ್ಲದೇ ನೀವು Gmail ನಿಂದ ನೇರವಾಗಿ ಕಾಮೆಂಟ್‌ಗಳಿಗೆ ಪ್ರತ್ಯುತ್ತರಿಸಬಹುದು ಮತ್ತು ನಿಮ್ಮ ಸ್ಪ್ರೆಡ್‌ಶೀಟ್‌ಗಳನ್ನು Google Meet ನಲ್ಲಿ ಸುಲಭವಾಗಿ ಪ್ರಸ್ತುತಪಡಿಸಬಹುದು.
ಸಹಯೋಗ ಮತ್ತು ಬುದ್ಧಿಮತ್ತೆಯನ್ನು Excel ಫೈಲ್‌ಗಳಿಗೆ ವಿಸ್ತರಿಸಿ
Microsoft Word ಫೈಲ್‌ಗಳನ್ನು ಪರಿವರ್ತಿಸದೇ, ಸುಲಭವಾಗಿ ಎಡಿಟ್ ಮಾಡಿ ಮತ್ತು ಕಾಮೆಂಟ್‌ಗಳು, ಕ್ರಿಯೆ ಐಟಂಗಳು ಹಾಗೂ Smart Fill ನಂತಹ Sheets ನ ವರ್ಧಿತ ಸಹಯೋಗಿ ಮತ್ತು ಸಹಾಯಕ ವೈಶಿಷ್ಟ್ಯಗಳನ್ನು ಬಳಸಿರಿ.
ಕಸ್ಟಮ್ ಪರಿಹಾರಗಳನ್ನು ನಿರ್ಮಿಸಿ
ವ್ಯಾಪಾರದ ಆ್ಯಪ್‌ಗಳು ಮತ್ತು ಆಟೋಮೇಶನ್‌ಗಳನ್ನು ನಿರ್ಮಿಸುವ ಮೂಲಕ ವರ್ಕ್‌ಫ್ಲೋಗಳ ವೇಗವರ್ಧಿಸಿ. ಕೋಡ್ ಅನ್ನು ಬರೆಯದೆಯೇ, Sheets ಅನ್ನು ಉಪಯೋಗಿಸಿಕೊಂಡು ಕಸ್ಟಮ್ ಅಪ್ಲಿಕೇಶನ್‌ಗಳನ್ನು ರಚಿಸಲು AppSheet ಬಳಸಿ. ಅಥವಾ Apps ಸ್ಕ್ರಿಪ್ಟ್ ಬಳಸಿಕೊಂಡು ಕಸ್ಟಮ್ ಫಂಕ್ಷನ್‌ಗಳು, ಮೆನು ಐಟಂಗಳು ಮತ್ತು ಮ್ಯಾಕ್ರೋಗಳನ್ನು ಸೇರಿಸಿ.
ಯಾವಾಗಲೂ ತಾಜಾ ಡೇಟಾದೊಂದಿಗೆ ಕೆಲಸ ಮಾಡಿ
Sheets ಬಳಸುವ ಮೂಲಕ, ಎಲ್ಲರೂ ಸಹ ಸ್ಪ್ರೆಡ್‌ಶೀಟ್‌ನ ಇತ್ತೀಚಿನ ಆವೃತ್ತಿಯ ಮೇಲೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಮತ್ತು ಎಡಿಟ್‌ಗಳನ್ನು ಆವೃತ್ತಿ ಇತಿಹಾಸದಲ್ಲಿ ಸ್ವಯಂಚಾಲಿತವಾಗಿ ಉಳಿಸುವುದರಿಂದಾಗಿ, ನಾವು ಮಾಡಿದ ಬದಲಾವಣೆಗಳನ್ನು ರದ್ದುಗೊಳಿಸಲು ಅಥವಾ ಪ್ರತ್ಯೇಕ ಸ್ಪ್ರೆಡ್‌ಶೀಟ್ ಸೆಲ್‌ನ ಎಡಿಟ್ ಇತಿಹಾಸವನ್ನು ನೋಡಲು ಸಹ ಸಾಧ್ಯವಾಗುತ್ತದೆ.
ನಿರ್ಣಾಯಕ ಡೇಟಾವನ್ನು ಅಡೆತಡೆಗಳಿಲ್ಲದೆ ಪಡೆದುಕೊಳ್ಳಿ
ನೀವು ಬಳಸುವ ಇತರ ಪರಿಕರಗಳಿಂದ ಡೇಟಾವನ್ನು ಪಡೆದುಕೊಂಡು, ವಿಶ್ಲೇಷಿಸಿ; ಉದಾಹರಣೆಗೆ, Salesforce ನಿಂದ ಗ್ರಾಹಕರ ಡೇಟಾ. Enterprise ಗ್ರಾಹಕರು, ಯಾವುದೇ ಕೋಡ್ ಅನ್ನು ಬರೆಯದೆಯೇ, ಕನೆಕ್ಟ್ ಮಾಡಲಾಗಿರುವ ಶೀಟ್‌ಗಳನ್ನು ಬಳಸಿಕೊಂಡು, Sheets ನಲ್ಲಿ ಲಕ್ಷಾಂತರ ಸಾಲುಗಳ BigQuery ಡೇಟಾವನ್ನು ವಿಶ್ಲೇಷಿಸಬಹುದು.
ಸುರಕ್ಷತೆ, ಅನುಸರಣೆ ಹಾಗೂ ಗೌಪ್ಯತೆ
ಡೀಫಾಲ್ಟ್ ಆಗಿ ಸುರಕ್ಷಿತವಾಗಿದೆ
ಮಾಲ್‌ವೇರ್‌ಗಳಿಂದ ಸುಧಾರಿತ ರಕ್ಷಣೆಯೂ ಸೇರಿದ ಹಾಗೆ, ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸಲು, ಉದ್ಯಮದಲ್ಲಿನ ಅತ್ಯುನ್ನತ ಸುರಕ್ಷತಾ ಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ. Sheets ಸಹ ಕ್ಲೌಡ್ ಆಧಾರಿತವಾಗಿದೆ, ಇದರಿಂದಾಗಿ ಸ್ಥಳೀಯ ಫೈಲ್‌ಗಳ ಅಗತ್ಯ ಕಡಿಮೆಯಾಗುತ್ತದೆ ಮತ್ತು ನಿಮ್ಮ ಸಾಧನಗಳಿಗೆ ಅಪಾಯದ ಸಾಧ್ಯತೆಯೂ ಕಡಿಮೆಯಾಗಿರುತ್ತದೆ.
ರವಾನಿಸುವಾಗ ಮತ್ತು ಸಂಗ್ರಹಣೆ ಮಾಡುವಾಗ ಎನ್‌ಕ್ರಿಪ್ಟ್ ಮಾಡಲಾಗುತ್ತದೆ
Google Drive ನಲ್ಲಿ ಅಪ್‌ಲೋಡ್ ಮಾಡಲಾದ ಅಥವಾ Sheets ನಲ್ಲಿ ರಚಿಸಲಾದ ಎಲ್ಲಾ ಫೈಲ್‌ಗಳನ್ನು ರವಾನಿಸುವಾಗ ಹಾಗೂ ಸ್ಂಗ್ರಹಣೆ ಮಾಡುವಾಗ ಎನ್‌ಕ್ರಿಪ್ಟ್ ಮಾಡಲಾಗುತ್ತದೆ.
ನಿಯಂತ್ರಕ ಅವಶ್ಯಕತೆಗಳನ್ನು ಬೆಂಬಲಿಸುವುದಕ್ಕಾಗಿ ಅನುಸರಣೆ
Sheets ಸೇರಿದ ಹಾಗೆ ನಮ್ಮ ಉತ್ಪನ್ನಗಳನ್ನು ನಿಯಮಿತವಾಗಿ ಸುರಕ್ಷತೆ, ಗೌಪ್ಯತೆ ಮತ್ತು ಅನುಸರಣೆ ನಿಯಂತ್ರಣಗಳ ಸ್ವತಂತ್ರ ದೃಢೀಕರಣಕ್ಕೆ ಒಳಪಡಿಸಲಾಗುತ್ತದೆ.
ವಿನ್ಯಾಸದಲ್ಲೇ ಗೌಪ್ಯತೆ ಅಡಕವಾಗಿದೆ
Google Cloud ನ ಇತರ ಎಂಟರ್‌ಪ್ರೈಸ್ ಸೇವೆಗಳು ಅನುಸರಿಸುವ ಅದೇ ಸದೃಢ ನೀತಿ ಬದ್ಧತೆಗಳು ಮತ್ತು ಡೇಟಾ ರಕ್ಷಣೆಯ ನಿಯಮಗಳಿಗೆ Sheets ಕೂಡಾ ಬದ್ಧವಾಗಿವೆ.
ನಿಮ್ಮ ಡೇಟಾವನ್ನು ನೀವೇ ನಿಯಂತ್ರಿಸುತ್ತೀರಿ.
ನಿಮ್ಮ Sheets ವಿಷಯವನ್ನು ನಾವು ಜಾಹೀರಾತುಗಳಿಗಾಗಿ ಎಂದೂ ಬಳಸಿಕೊಳ್ಳುವುದಿಲ್ಲ.
ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಥರ್ಡ್-ಪಾರ್ಟಿಗಳಿಗೆ ಎಂದೂ ಮಾರಾಟ ಮಾಡುವುದಿಲ್ಲ.
ನಿಮಗೆ ಸೂಕ್ತವಾದ ಪ್ಲಾನ್ ಅನ್ನು ಹುಡುಕಿ
Google Sheets, Google Workspace ನ ಭಾಗವಾಗಿದೆ
ಪ್ರತಿ ಪ್ಲಾನ್ ಇವುಗಳನ್ನು ಒಳಗೊಂಡಿರುತ್ತದೆ
ವೈಯಕ್ತಿಕ ಬಳಕೆಗಾಗಿ (ಶುಲ್ಕ ರಹಿತ) |
Business Standard$12 USD
ಪ್ರತಿ ಬಳಕೆದಾರರಿಗೆ ತಿಂಗಳಿಗೆ, 1 ವರ್ಷದ ಬದ್ಧತೆ ಅಥವಾ ಮಾಸಿಕವಾಗಿ ಬಿಲ್ ಮಾಡಿದಾಗ ಪ್ರತಿ ಬಳಕೆದಾರರಿಗೆ ತಿಂಗಳಿಗೆ $14.40
|
|
---|---|---|
Docs, Sheets, Slides, Forms
ಕಂಟೆಂಟ್ ರಚನೆ |
||
Drive
ಸುರಕ್ಷಿತ ಕ್ಲೌಡ್ ಸಂಗ್ರಹಣೆ |
ಪ್ರತಿ ಬಳಕೆದಾರರಿಗೆ 15 GB |
ಪ್ರತಿ ಬಳಕೆದಾರರಿಗೆ 2 TB |
ನಿಮ್ಮ ತಂಡಕ್ಕಾಗಿ ಹಂಚಿಕೊಂಡ ಡ್ರೈವ್‌ಗಳು |
||
Gmail
ಸುರಕ್ಷಿತ ಇಮೇಲ್ |
||
ಕಸ್ಟಮ್ ವ್ಯಾಪಾರದ ಇಮೇಲ್ |
||
Meet
ವೀಡಿಯೊ ಮತ್ತು ಧ್ವನಿ ಕಾನ್ಫರೆನ್ಸಿಂಗ್ |
100 ಭಾಗವಹಿಸುವವರು |
150 ಭಾಗವಹಿಸುವವರು |
ಮೀಟಿಂಗ್ ರೆಕಾರ್ಡಿಂಗ್‌ಗಳನ್ನು Drive ನಲ್ಲಿ ಉಳಿಸಲಾಗಿದೆ |
||
ನಿರ್ವಾಹಕರು
ಕೇಂದ್ರೀಕೃತ ಆಡಳಿತ |
||
ಗುಂಪು ಆಧಾರಿತ ಭದ್ರತಾ ನೀತಿ ನಿಯಂತ್ರಣಗಳು |
||
ಗ್ರಾಹಕ ಬೆಂಬಲ |
ಸ್ವಯಂ ಸೇವಾ ಆನ್‌ಲೈನ್ ಮತ್ತು ಸಮುದಾಯ ಫೋರಂಗಳು |
24/7 ಆನ್‌ಲೈನ್ ಬೆಂಬಲ ಹಾಗೂ ಸಮುದಾಯ ಫೋರಂಗಳು |
ಎಲ್ಲಿಂದ ಬೇಕಾದರೂ, ಯಾವುದೇ ಸಾಧನದಿಂದ ಸಹಯೋಗದಲ್ಲಿ ಕೆಲಸ ಮಾಡಿ
ನೀವು ಎಲ್ಲಿದ್ದರೂ — ಯಾವುದೇ ಮೊಬೈಲ್ ಸಾಧನ, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ನಿಂದ — ಆಫ್‌ಲೈನ್‌ನಲ್ಲಿರುವಾಗಲೂ ನಿಮ್ಮ ಸ್ಪ್ರೆಡ್‌ಶೀಟ್‌ಗಳಿಗೆ ಪ್ರವೇಶ ಪಡೆಯಿರಿ, ರಚಿಸಿ ಮತ್ತು ಎಡಿಟ್ ಮಾಡಿ.
ಟೆಂಪ್ಲೇಟ್ಗಳನ್ನು ಬಳಸಲು ಪ್ರಾರಂಭಿಸಿ
ಕೆಲಸಗಳನ್ನು ತ್ವರಿತವಾಗಿ ಪ್ರಾರಂಭಿಸಲು, ವಿವಿಧ ಡ್ಯಾಶ್ಬೋರ್ಡ್ಗಳು, ಪ್ರಾಜೆಕ್ಟ್ ಟ್ರ್ಯಾಕರ್ಗಳು ಮತ್ತು ವೃತ್ತಿಪರವಾಗಿ ವಿನ್ಯಾಸಗೊಳಿಸಲಾದ ಇತರ ಟೆಂಪ್ಲೇಟ್ಗಳಿಂದ ಆಯ್ಕೆ ಮಾಡಿ.
ಇನ್ನಷ್ಟು ಟೆಂಪ್ಲೇಟ್ಗಳನ್ನು ನೋಡಲು, Sheets ಟೆಂಪ್ಲೇಟ್ ಗ್ಯಾಲರಿಗೆ ಭೇಟಿ ನೀಡಿ.